ವಿದ್ಯುತ್, ನೀರಿನ ಸಂಪರ್ಕ, ವಾರ್ಷಿಕ ವರದಿಗೆ ಲಂಚದ ಬೇಡಿಕೆ ಬಂದ ವಿಷಯ ಬಹಿರಂಗಪಡಿಸಿದ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ
ಖ್ಯಾತ ಉದ್ಯಮಿ ಮತ್ತು ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಟಿ.ವಿ. ಮೋಹನ್ ದಾಸ್ ಪೈ ಅವರು ಸರ್ಕಾರಿ ಕಚೇರಿಗಳಲ್ಲಿನ ಲಂಚ ವ್ಯವಸ್ಥೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮ ನಡೆಸಲು ಅನುಭವಿಸಬೇಕಾದ ಕಷ್ಟಗಳು ಮತ್ತು ಪ್ರತಿ ಹಂತದಲ್ಲೂ ಬೇರೂರಿರುವ ಭ್ರಷ್ಟಾಚಾರದ ಬಗ್ಗೆ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ. ಮೋಹನ್ ದಾಸ್ ಪೈ ಅವರ ಪ್ರಕಾರ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವಾಗ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಲಂಚ ನೀಡುವುದು ಅನಿವಾರ್ಯ. ಕಟ್ಟಡ ನಿರ್ಮಾಣದ ಯೋಜನೆಗೆ ಅನುಮೋದನೆ ಪಡೆಯಲು ಪ್ರತಿ ಚದರ ಅಡಿಗೆ 100 ರೂ. ಲಂಚ ಮೊದಲೇ ನಿಗದಿಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
