ಪ್ರತ್ಯೇಕ ಜಿಲ್ಲೆ ರಚನೆಗೆ ಬೈಲಹೊಂಗಲ ರಾಜಕಾರಣಿಗಳಿಂದಲೂ ಒತ್ತಡ
ಬೆಳಗಾವಿ ಜಿಲ್ಲೆಯನ್ನು ಎರಡು ಅಥವಾ ಮೂರು ಜಿಲ್ಲೆಗಳನ್ನಾಗಿ ವಿಭಜಿಸಬೇಕೆಂಬ ಕೂಗು ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಬೆಳಗಾವಿಯ ಬಹುತೇಕ ರಾಜಕಾರಣಿಗಳು ವಿಭಜನೆಗೆ ಪಟ್ಟು ಹಿಡಿದಿದ್ದಾರೆ. ಆದರೆ, ಬೆಳಗಾವಿ ಗಡಿ ವಿವಾದ ಮತ್ತೆ ಕಗ್ಗಂಟಾಗುವ ಆತಂಕದಲ್ಲಿ ಸರ್ಕಾರ ಜಿಲ್ಲೆ ವಿಭಜನೆಗೆ ಹಿಂದೇಟು ಹಾಕುತ್ತಿದೆ.


