ಬದಲಾಯ್ತು ಪೊಲೀಸರ ಟೋಪಿ: 'ಸ್ಲೋಚ್ ಹ್ಯಾಟ್' ಬದಲು 'ಪೀಕ್ ಕ್ಯಾಪ್', ಸಿಬ್ಬಂದಿ ಫುಲ್ ಖುಷ್!
ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಹಳೆಯ 'ಸ್ಲೋಚ್ ಹ್ಯಾಟ್' ಬದಲಿಗೆ ನೂತನ 'ಪೀಕ್ ಕ್ಯಾಪ್'ಗಳನ್ನು ವಿತರಿಸಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಯೋಜನೆಗೆ ಚಾಲನೆ ನೀಡಿದರು. ಹಗುರ ಹಾಗೂ ಹೆಚ್ಚು ಅನುಕೂಲಕರವಾಗಿರುವ ಈ ಹೊಸ ಟೋಪಿಗಳ ಬಗ್ಗೆ ಪೊಲೀಸ್ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.


