25 ವರ್ಷದ ಹಾದಿ, ಮುಂದೆ ಅಧಿಕಾರದೇ ಗುರಿ: ಸಿ.ಬಿ. ಸುರೇಶ್ ಬಾಬು ವಿಶ್ವಾಸದ ಮಾತು | JDS Silver Jubilee
ಜೆಡಿಎಸ್ (JDS) 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಅವರು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ್ದಾರೆ. ಪಕ್ಷದ 25 ವರ್ಷಗಳ ಏಳು-ಬೀಳುಗಳು, ದೇವೇಗೌಡರ ಹೋರಾಟ ಮತ್ತು ಎಚ್.ಡಿ. ಕುಮಾರಸ್ವಾಮಿಯವರ ಆಡಳಿತದ ಬಗ್ಗೆ ಅವರು ಮೆಲುಕು ಹಾಕಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, "ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಏಕೈಕ ಗುರಿ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ನ ಮುಂದಿನ ಕಾರ್ಯತಂತ್ರಗಳೇನು? ಕಾರ್ಯಕರ್ತರಿಗೆ ಅವರ ಸಂದೇಶವೇನು? ಪೂರ್ತಿ ಸಂದರ್ಶನವನ್ನು ಈ ವಿಡಿಯೋದಲ್ಲಿ ನೋಡಿ.


