ಖಡ್ಗ, ದೊಣ್ಣೆಯೊಂದಿಗೆ ಪಥಸಂಚಲನ: ಭೀಮ್ ಆರ್ಮಿ ನಿರ್ಧಾರಕ್ಕೆ ಕಾರಣವೇನು?
ಚಿತ್ತಾಪುರದಲ್ಲಿ ನವೆಂಬರ್ 2ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಉದ್ದೇಶಿಸಿರುವ ದಿನದಂದೇ, ಭೀಮ್ ಆರ್ಮಿ ಸಂಘಟನೆಯೂ ಪಥಸಂಚಲನಕ್ಕೆ ಅನುಮತಿ ಕೇಳಿರುವುದು ಇದೀಗ ಭಾರೀ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ, ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜ್ ಗೋಪಾಲ್ .ಡಿ. ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಆರ್‌ಎಸ್‌ಎಸ್ ವಿರುದ್ಧವೇ ಪಥಸಂಚಲನ ಏಕೆ? ಖಡ್ಗ ಮತ್ತು ಬಂದೂಕುಗಳನ್ನು ಹಿಡಿದು ಪಥಸಂಚಲನ ನಡೆಸುವ ಹಿಂದಿನ ಉದ್ದೇಶವೇನು? ಸರ್ಕಾರದ ನಿಲುವೇನು? ಎಂಬ ಹಲವು ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.


