ಬೇಸೂರಿನಲ್ಲಿ ಅಣುಸ್ಥಾವರ ಸಮೀಕ್ಷೆ; ಮಲೆನಾಡಿನ ಮೇಲೆ ಅಭಿವೃದ್ಧಿಯ ಒತ್ತಡ
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ, ರಸ್ತೆ ಸುರಂಗ, ಜಲವಿದ್ಯುತ್ ಯೋಜನೆ, ರೈಲ್ವೆ ಮಾರ್ಗ ಹಾಗೂ ಅಣುಸ್ಥಾವರಗಳ ಪ್ರಸ್ತಾಪ ಇದೀಗ ಮಲೆನಾಡು ಮತ್ತು ಕರಾವಳಿ ಭಾಗದ ಜನರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಈ ಹೊಸ ಯೋಜನೆಗಳಿಗಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾದ ಭೀತಿ ಎದುರಾಗಿದೆ. ಶೆಟ್ಟಿಹಳ್ಳಿ, ಸೋಮೇಶ್ವರ, ಕುದುರೆಮುಖ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಂತಹ ಪರಿಸರ ಸೂಕ್ಷ್ಮ ವಲಯಗಳು ನಾಶವಾಗುವ ಹಂತ ತಲುಪಿವೆ. ಈಗಾಗಲೇ ಕೈಗಾ ಅಣುಸ್ಥಾವರದಿಂದ ಕಾಳಿ ನದಿ ಕಲುಷಿತಗೊಂಡು, ಸ್ಥಳೀಯರು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರ ನಡುವೆ, ಶಿವಮೊಗ್ಗದ ಶರಾವತಿ ಕಣಿವೆ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ಸ್ಥಾವರಕ್ಕೆ ಸಮೀಕ್ಷೆಗಳು ನಡೆಯುತ್ತಿರುವುದು ಏಷ್ಯಾದಲ್ಲೇ ಅಪರೂಪವಾದ ಸಿಂಹಬಾಲದ ಸಿಂಗಳೀಕಗಳ ಸಂತತಿಗೆ ಗಂಡಾಂತರ ಎದುರಾಗಿದೆ. ಈ ಕುರಿತು ಹಿರಿಯ ಪತ್ರಕರ್ತ ಹಾಗೂ ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಅವರೊಂದಿಗೆ ನಡೆಸಿದ ಸಂಪೂರ್ಣ ವಿಡಿಯೋ ಚರ್ಚೆ ಇಲ್ಲಿದೆ.