ನರೇಗಾ ಔಟ್, 'ವಿ.ಬಿ-ಜಿ ರಾಮ್ ಜಿ' ಇನ್: 100 ಅಲ್ಲ 125 ದಿನ ಕೆಲಸ; ರಾಜ್ಯಕ್ಕೆ ಹೊಸ ಟೆನ್ಶನ್!

15 Dec 2025 4:37 PM IST

ದೇಶದ ಅತ್ಯಂತ ಜನಪ್ರಿಯ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)ಯ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ನರೇಗಾ ಬದಲು ಇನ್ನು ಮುಂದೆ 'ವೀಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್' (VB-G RAM G) ಎಂದು ಮರುನಾಮಕರಣ ಮಾಡಲು ಉದ್ದೇಶಿಸಲಾಗಿದೆ. ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್, "ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು ಬಿಜೆಪಿಯ ಗುಪ್ತ ಅಜೆಂಡಾ," ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ 'ದಿ ಫೆಡರಲ್ ಕರ್ನಾಟಕ'ದ ಜೊತೆ ಅವರು ಮಾತನಾಡಿದ್ದು, ಕೇಂದ್ರದ ನಡೆಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.