ನವೆಂಬರ್ 4-6: ಬೆಂಗಳೂರಿನಲ್ಲಿ ಬೃಹತ್ ಕೌಶಲ್ಯ ಶೃಂಗ ಸಭೆ, ಸಚಿವರು ಹೇಳಿದ್ದೇನು? | Dr Sharanprakash Patil
ಕರ್ನಾಟಕವನ್ನು ಜಾಗತಿಕ ಕೌಶಲ್ಯ ಕೇಂದ್ರವನ್ನಾಗಿ ರೂಪಿಸುವ ಬೃಹತ್ ಗುರಿಯೊಂದಿಗೆ, 'ಬೆಂಗಳೂರು ಕೌಶಲ್ಯ ಶೃಂಗ ಸಭೆ 2025'ಕ್ಕೆ ಮಂಗಳವಾರ ಅದ್ಧೂರಿ ಚಾಲನೆ ದೊರೆತಿದೆ. ನವೆಂಬರ್ 4 ರಿಂದ 6ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಶೃಂಗಸಭೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. 'ದ ಫೆಡರಲ್ ಕರ್ನಾಟಕ' ಈ ಮಹತ್ವದ ಕಾರ್ಯಕ್ರಮದ ಅಧಿಕೃತ ಮಾಧ್ಯಮ ಸಹಭಾಗಿತ್ವವನ್ನು ಹೊಂದಿದೆ. ಈ ಶೃಂಗ ಸಭೆಯ ಕುರಿತು ಮಾತನಾಡಿದ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, "ವರ್ಕ್‌ಫೋರ್ಸ್ 2030: ಸ್ಕೇಲ್, ಸಿಸ್ಟಮ್ಸ್, ಸಿನರ್ಜಿ" ಎಂಬ ಧ್ಯೇಯದೊಂದಿಗೆ, ಯುವಕರಿಗೆ ಭವಿಷ್ಯಕ್ಕೆ ಬೇಕಾದ ಕೌಶಲ್ಯಗಳನ್ನು ನೀಡಿ, ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ," ಎಂದು ಹೇಳಿದರು. ಈ ಶೃಂಗ ಸಭೆಯಲ್ಲಿ 100ಕ್ಕೂ ಹೆಚ್ಚು ತಜ್ಞರು, 50ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 3000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.


