ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮರುಭೂಮಿ ಅಪಾಯ: ತಡೆಗೆ ಬೇಕು ಹಸಿರು ಗೋಡೆ

24 Feb 2026 5:42 PM IST

ಪರಿಸರ ನಾಶದಿಂದ ಉತ್ತರ ಕರ್ನಾಟಕ ಭಾಗದ 5 ಜಿಲ್ಲೆಗಳಲ್ಲಿ ಮರುಭೂಮಿ ಸೃಷ್ಠಿಯಾಗುತ್ತಿರುವ ಆತಂಕ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಮರುಭೂಮಿ ಸದೃಶ ವಾತಾವರಣ ನಿರ್ಮಾಣ ಆಗುತ್ತಿದೆ. ಗುಜರಾತ್ ನ ಕಛ್‌ನ ರಣವನ್ನು ಬಿಟ್ಟರೆ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ತಡೆಯಲು ಹಸಿರುಗೋಡೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಬೆಳಗಾವಿಯಿಂದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿವರೆಗೆ ಐದು ಜಿಲ್ಲೆಗಳಲ್ಲಿ ಈ ಹಸಿರುಗೋಡೆ ನಿರ್ಮಾಣ ಮಾಡುವುದು.‌ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪರಿಸರವಾದಿ ಯೋಜನಾ ಆಯೋಗದ ಪರಿಸರ ಸದಸ್ಯ ನಾಗೇಶ್ ಹೆಗಡೆ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.‌ ಜಗತ್ತಿನ ಎಲ್ಲ ಅನೇಕ ಕಡೆ ಮರುಭೂಮಿ ವಿಸ್ತರಿಸುತ್ತಿದ್ದು ಶತಾಯಗತಾಯ ಅಂಥ ವಿಸ್ತರಣೆಯನ್ನು ತಡೆಯಲೆಂದು ಅನೇಕ ಖಂಡಗಳಲ್ಲಿ, ದೇಶಗಳಲ್ಲಿ ಯತ್ನಗಳು ನಡೆದಿವೆ. ನಮ್ಮಲ್ಲೂ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಅಂಥದ್ದೊಂದು ಯೋಜನೆ ಬರಬೇಕು. ಈ ಹಸಿರು ತಡೆಗೋಡೆ ಯಾಕೆ ಬೇಕು ಆಗದಿದ್ದರೆ ಏನಾಗಲಿದೆ ಎಂಬ ಬಗ್ಗೆ ʻದ ಫೆಡರಲ್ ಕರ್ನಾಟಕʼದ ಜತೆ ನಾಗೇಶ ಹೆಗಡೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ