613 ಕೋಟಿ ಬಾಡಿಗೆ ನೀಡುವ ಬಗ್ಗೆ ಹಲವು ಪ್ರಶ್ನೆ ಕೇಳಿದ ನಿಖಿಲ್ ಕುಮಾರಸ್ವಾಮಿ

19 Nov 2025 1:51 PM IST  ( Updated:2025-11-19 08:59:53  )

ರಾಜ್ಯ ಸರ್ಕಾರವು 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೂ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡಿದ್ದು, ಬಾಡಿಗೆ ನೆಪದಲ್ಲಿ ಕಮಿಷನ್‌ ಗೋಲ್ ಮಾಲ್ ನಡೆಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರರು. ಬಾಡಿಗೆ ಬದಲು ಖರೀದಿಗೆ ಕಡಿಮೆ ವೆಚ್ಚ. ಇದು ತಪ್ಪು ಲೆಕ್ಕಾಚಾರವಲ್ಲ. ಗಣಿತವನ್ನು ಮಧ್ಯಾಹ್ನದ ಬೆಳಕಲ್ಲೇ ಕೊಂದು, ಹೂತು, ದಹನ ಮಾಡಿದಂತದ್ದು ಎಂದು ಕಿಡಿಕಾರಿದರು.