ಸೈಬರ್ ಕ್ರೈಂ, ಅಪರಾಧ ಪ್ರಕರಣ ತಡೆಯದ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‌ಸಿ ಕೇಶವಪ್ರಸಾದ್ ವಾಗ್ದಾಳಿ
ಕಾನೂನು ಸುವ್ಯವಸ್ಥೆಯನ್ನು ಆದ್ಯತೆಯ ಮೇಲೆ ಪರಿಗಣಿಸಬೇಕೆಂಬ ಪರಿಜ್ಞಾನ ರಾಜ್ಯ ಸರ್ಕಾಕ್ಕಿಲ್ಲ, ಮಹಿಳೆ ಮತ್ತು ಮಕ್ಕಳ ಮೇಲೆ ಬಲತ್ಕಾರ, ಸೈಬರ್ ಕ್ರೈಂಗಳು ಹೆಚ್ಚಾಗಿವೆ. ಬೆಂಗಳೂರು, ಮೈಸೂರಿನಲ್ಲಿ ಬಾಲಕಿಯರ ಅಪಹರಣ, ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆ, ಜೈಲುಗಳಲ್ಲಿ ಕೈದಿಗಳು ಐಷಾರಾಮಿ ಜೀವನ ಮಾಡುತ್ತಿದ್ದಾರೆ, ಇಡೀ ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ ಎಂದು ಬಿಜೆಪಿ ಎಂಎಲ್ಸಿ ಕೇಶವ ಪ್ರಸಾದ್ ಆರೋಪಿಸಿದರು.


