LIVE | Metro Fare Hike: ಕೇಂದ್ರದ ಮಧ್ಯಪ್ರವೇಶದಿಂದ ರಾಜ್ಯ ಸರ್ಕಾರಕ್ಕೆ ಮುಜುಗರ? ಅಸಲಿ ಸತ್ಯ ಇಲ್ಲಿದೆ

7 Feb 2026 6:09 PM IST

ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಸದ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರದಿಂದ ಜಾರಿಯಾಗಬೇಕಿದ್ದ ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರ ದಿಢೀರ್ ಬ್ರೇಕ್ ಹಾಕಿದೆ. ಈ ಬೆಳವಣಿಗೆಯ ಬೆನ್ನಲ್ಲೇ, "ಅಷ್ಟಕ್ಕೂ ಮೆಟ್ರೋ ದರ ಏರಿಕೆಗೆ ನಿಜವಾದ ಹೊಣೆ ಯಾರದ್ದು?" ಎಂಬ ಚರ್ಚೆ ಜೋರಾಗಿದೆ. ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸುತ್ತಿತ್ತು. 'ದರ ನಿಗದಿ ಸಮಿತಿ' (Fare Fixation Committee - FFC) ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ, ನಮಗೆ ಅದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಆದರೆ, ಈಗ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಮಧ್ಯಪ್ರವೇಶಿಸಿ ದರ ಏರಿಕೆಯನ್ನು ತಡೆಹಿಡಿದಿರುವುದು ಈ ವಾದಕ್ಕೆ ಹೊಸ ತಿರುವು ನೀಡಿದೆ

ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಸದ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರದಿಂದ ಜಾರಿಯಾಗಬೇಕಿದ್ದ ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರ ದಿಢೀರ್ ಬ್ರೇಕ್ ಹಾಕಿದೆ. ಈ ಬೆಳವಣಿಗೆಯ ಬೆನ್ನಲ್ಲೇ, "ಅಷ್ಟಕ್ಕೂ ಮೆಟ್ರೋ ದರ ಏರಿಕೆಗೆ ನಿಜವಾದ ಹೊಣೆ ಯಾರದ್ದು?" ಎಂಬ ಚರ್ಚೆ ಜೋರಾಗಿದೆ. ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸುತ್ತಿತ್ತು. 'ದರ ನಿಗದಿ ಸಮಿತಿ' (Fare Fixation Committee - FFC) ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ, ನಮಗೆ ಅದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಆದರೆ, ಈಗ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಮಧ್ಯಪ್ರವೇಶಿಸಿ ದರ ಏರಿಕೆಯನ್ನು ತಡೆಹಿಡಿದಿರುವುದು ಈ ವಾದಕ್ಕೆ ಹೊಸ ತಿರುವು ನೀಡಿದೆ.