LIVE | ನವೆಂಬರ್ ಕ್ರಾಂತಿ: ದೆಹಲಿಯಲ್ಲಿ ಸುರ್ಜೆವಾಲಾ ಭೇಟಿಯಾದ ಸಿದ್ದರಾಮಯ್ಯ ರಾಯಭಾರಿ ಜಾರಕಿಹೊಳಿ

12 Nov 2025 3:59 PM IST

ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಸುದ್ದಿಗಳ ನಡುವೆ ಸದ್ದಿಲ್ಲದೆ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಸಂದೇಶವನ್ನು ಸತೀಶ್ ಜಾರಕಿಹೊಳಿ ಹೈಕಮಾಂಡ್ ಗೆ ಸುರ್ಜೆವಾಲಾ ಮೂಲಕ ತಲುಪಿಸಿದ್ರಾ ಎನ್ನುವ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ.