LIVE | ಗದ್ದುಗೆ ಗುದ್ದಾಟ: ಡಿಕೆಶಿ ಔತಣಕೂಟಕ್ಕೆ ಬಂದ ಶಾಸಕರೆಷ್ಟು? | DKS Power Show in Belagavi

12 Dec 2025 9:39 AM IST

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಆಯೋಜಿಸಿದ 'ಡಿನ್ನರ್ ಮೀಟಿಂಗ್' (Dinner Meeting) ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ, ಡಿ.ಕೆ.ಶಿ ತಮ್ಮ ಆಪ್ತ ಮುಖಂಡರೊಬ್ಬರ ತೋಟದ ಮನೆಯಲ್ಲಿ ಆಯೋಜಿಸಿದ್ದ ಈ ರಾತ್ರಿ ಊಟದ ಕೂಟದಲ್ಲಿ ಭಾಗವಹಿಸಿದ ಶಾಸಕರ ಸಂಖ್ಯೆ ಈಗ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.