LIVE:ಧರ್ಮಸ್ಥಳ ಕೇಸ್; 200 ಕೋಟಿ ರಹಸ್ಯ ಬಯಲು ಮಾಡುವಂತೆ ಡಿಕೆಶಿಗೆ ಸಿ.ಟಿ. ರವಿ ಪತ್ರ
ಧರ್ಮಸ್ಥಳ ಪ್ರಕರಣ: 200 ಕೋಟಿ ಷಡ್ಯಂತ್ರದ ಆರೋಪ! ಡಿಕೆಶಿಗೆ ಸಿ.ಟಿ ರವಿ ಪತ್ರ | Dharmasthala Case Big Twist
ಧರ್ಮಸ್ಥಳ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬರೋಬ್ಬರಿ 200 ಕೋಟಿ ರೂ.ಗಳ ಷಡ್ಯಂತ್ರದ ಆರೋಪ ಕೇಳಿಬಂದಿದೆ. ಧರ್ಮಸ್ಥಳದಲ್ಲಿ ಸಂತ್ರಸ್ತರ ಮೃತದೇಹಗಳನ್ನು ತಾನೇ ಹೂತಿದ್ದೇನೆ ಎಂದು ಹೇಳಿಕೊಂಡಿದ್ದ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸಲು ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ. ಇದೇ ವೇಳೆ, ಈ ಪ್ರಕರಣ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪ್ರಕರಣದ ಹಿಂದಿರುವ 200 ಕೋಟಿ ಷಡ್ಯಂತ್ರದ ಬಗ್ಗೆ ಸಿಬಿಐ (CBI) ತನಿಖೆಯಾಗಬೇಕು ಎಂದು ಅವರು ತೀವ್ರವಾಗಿ ಆಗ್ರಹಿಸಿದ್ದಾರೆ. ಪ್ರಕರಣದ ಸಂಪೂರ್ಣ ಹಿನ್ನೆಲೆ, ಚಿನ್ನಯ್ಯ ಅವರ ಆರೋಪಗಳು ಮತ್ತು ಸಿ.ಟಿ. ರವಿ ಅವರ ಪತ್ರದಲ್ಲಿ ಏನಿದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ. ವಿಡಿಯೋವನ್ನು ಕೊನೆಯವರೆಗೂ ನೋಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

