x

LIVE | 'ಕೈ' ಶಾಸಕರಿಗೆ ವಂಡರ್ ಲಾ ರೆಸಾರ್ಟ್ ಬುಕ್, ಭಾಗವತ್ ಗೆ ಖರ್ಗೆ ಪತ್ರ, ರಾಜ್ಯದವರಿಗಷ್ಟೇ ಗ್ಯಾರಂಟಿ ಲಾಭ

'ಕೈ' ಶಾಸಕರಿಗೆ ವಂಡರ್ ಲಾ ರೆಸಾರ್ಟ್ ಬುಕ್, ಭಾಗವತ್ ಗೆ ಖರ್ಗೆ ಪತ್ರ, ರಾಜ್ಯದವರಿಗಷ್ಟೇ ಗ್ಯಾರಂಟಿ ಲಾಭ


ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಒಟ್ಟು ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಐದು, ಮೈತ್ರಿಪಕ್ಷಗಳಲ್ಲಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ನಾಳೆ ಬಿಡದಿಯ ವಂಡರ್ಲಾ ರೆಸಾರ್ಟ್ಗೆ ಶಿಫ್ಟ್ ಆಗಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ತನ್ನ ನೂರನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಹೊತ್ತಲ್ಲೇ, ಸಂಘದ ಪಾರದರ್ಶಕತೆ ಹಾಗೂ ಸಂವಿಧಾನಾತ್ಮಕ ಹೊಣೆಗಾರಿಕೆಯ ಕುರಿತು ಪ್ರಶ್ನಿಸಿ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ರವಾನಿಸಿದ್ದಾರೆ.

ರಾಜ್ಯದಲ್ಲಿ ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಹಣ ಯಾರದ್ದೋ ಅಕೌಂಟ್ಗೆ ಹೋಗ್ತಿದೆ. ಆದ್ದರಿಂದ ಪರಿಷ್ಕರಣೆ ಮಾಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Read More
Next Story