LIVE | ಬೆಳಗಾವಿ ಅಧಿವೇಶನ: 5ನೇ ದಿನ ಏನೇನಾಯ್ತು? ಸದನಕ್ಕಿಂತ ಹೊರಗೇ ಜೋರಾಯ್ತು ಚರ್ಚೆ!
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ 5ನೇ ದಿನದಂದು ಸದನದ ಒಳಗಿನ ಕಲಾಪಕ್ಕಿಂತ ಹೊರಗಿನ ರಾಜಕೀಯ ಬೆಳವಣಿಗೆಗಳೇ ಹೆಚ್ಚು ಸದ್ದು ಮಾಡಿದವು. ಒಂದೆಡೆ ಸದನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು ಮತ್ತು ಪ್ರಶ್ನೋತ್ತರ ಕಲಾಪ ನಡೆದರೆ, ಮತ್ತೊಂದೆಡೆ ಹೊರಗೆ ನಾಯಕತ್ವ ಬದಲಾವಣೆ (Leadership Change) ಮತ್ತು ಡಿನ್ನರ್ ಪಾಲಿಟಿಕ್ಸ್ (Dinner Politics) ಜೋರಾಗಿ ಚರ್ಚೆಯಾಯಿತು. ಸಿಎಂ ಮತ್ತು ಡಿಸಿಎಂ ಬಣಗಳ ನಡುವಿನ ಮುಸುಕಿನ ಗುದ್ದಾಟ, ವಿಪಕ್ಷಗಳ ಟೀಕೆ ಮತ್ತು ಇಂದಿನ ಕಲಾಪದ ಸಂಪೂರ್ಣ ವಿವರ ಇಲ್ಲಿದೆ.


