ಕಾರ್ಮಿಕ ಸಂಹಿತೆ ಜಾರಿ: ಮಾಲೀಕರಿಗೆ ಲಾಭ? ಕಾರ್ಮಿಕರಿಗೆ ನಷ್ಟ? | New Labour Codes Impact Explained
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ 4 ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿವೆ. ಈ ಹೊಸ ನಿಯಮಗಳು ಜಾರಿಯಾದರೆ ಉದ್ಯೋಗಿಗಳ ಕೆಲಸದ ಅವಧಿ, ಕೈಗೆ ಸಿಗುವ ಸಂಬಳ , ಪಿಎಫ್ ಮತ್ತು ಉದ್ಯೋಗ ಭದ್ರತೆಯ ಮೇಲೆ ಆಗುವ ಪರಿಣಾಮಗಳೇನು? ಇದು ಕಂಪನಿಗಳಿಗೆ ಲಾಭದಾಯಕವೇ ಅಥವಾ ಕಾರ್ಮಿಕರಿಗೆ ಮಾರಕವೇ? ಈ ಬಗ್ಗೆ ಸಿಐಟಿಯು (CITU) ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ ಅವರು ಕೂಲಂಕಷವಾಗಿ ವಿವರಿಸಿದ್ದಾರೆ. ಕಾರ್ಮಿಕ ಸಂಘಟನೆಗಳು ಈ ಸಂಹಿತೆಯನ್ನು ಏಕೆ ವಿರೋಧಿಸುತ್ತಿವೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.


