KSCA ಚುನಾವಣೆ; ಕಾಲ್ತುಳಿತ ಘಟನೆ ಬಗ್ಗೆ ಶಾಂತಕುಮಾರ್ ಸ್ಪಷ್ಟನೆ ಏನು? | KSCA Election Update

21 Nov 2025 5:16 PM IST

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಚುನಾವಣಾ ಕಣ ರಂಗೇರಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೆ.ಎನ್. ಶಾಂತಕುಮಾರ್ ಅವರು ತಮ್ಮ ತಂಡದ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿಸ್ಪರ್ಧಿ ತಂಡದ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಮ್ಮ ತಂಡದ ಕೆಲಸಗಳೇ ಗೆಲುವಿಗೆ ಮಾನದಂಡವಾಗಲಿವೆ ಎಂದರು. ಇದೇ ವೇಳೆ, ಇತ್ತೀಚೆಗೆ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಾಂತಕುಮಾರ್, ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಅಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತನಾಡಿದರು. ಚುನಾವಣಾ ಪ್ರಚಾರ ಮತ್ತು ಮುಂದಿನ ಯೋಜನೆಗಳ ಕುರಿತು ಶಾಂತಕುಮಾರ್ ಅವರ ಸಂಪೂರ್ಣ ಹೇಳಿಕೆಗಾಗಿ ಈ ವಿಡಿಯೋ ನೋಡಿ.