LIVE | ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣ ನಿರಾಕರಿಸಿದ್ದೇಕೆ? ಬಿಕ್ಕಟ್ಟು ಶಮನಕ್ಕೆ ಎಚ್.ಕೆ. ಪಾಟೀಲ್ ಎಂಟ್ರಿ!
ಕರ್ನಾಟಕ ರಾಜಕಾರಣದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಈಗ ಉತ್ತುಂಗಕ್ಕೆ ತಲುಪಿದೆ. ಜನವರಿ 22ರಂದು (ನಾಳೆ) ನಿಗದಿಯಾಗಿರುವ ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎನ್ನಲಾಗುತ್ತಿರುವುದು ಭಾರಿ ಸಂಚಲನ ಮೂಡಿಸಿದೆ. ಕೇಂದ್ರ ಸರ್ಕಾರವು 'ಮನರೇಗಾ' (MGNREGA) ಯೋಜನೆಯನ್ನು ರದ್ದುಗೊಳಿಸಿ ತಂದಿರುವ ಹೊಸ ಕಾಯ್ದೆಯ ವಿರುದ್ಧ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರ ಈ ವಿಶೇಷ ಜಂಟಿ ಅಧಿವೇಶನ ಕರೆದಿದೆ. ಆದರೆ, ಸಂವಿಧಾನದ ವಿಧಿ 176ರ ಅಡಿಯಲ್ಲಿ ರಾಜ್ಯಪಾಲರ ಭಾಷಣ ಕಡ್ಡಾಯವಾಗಿದ್ದರೂ, ಕೆಲವು ತಾಂತ್ರಿಕ ಅಥವಾ ರಾಜಕೀಯ ಕಾರಣಗಳಿಂದಾಗಿ ರಾಜ್ಯಪಾಲರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.