ಸಿದ್ದು ಸರ್ಕಾರದ ಎರಡೂವರೆ ವರ್ಷ ಆಡಳಿದಲ್ಲಿ ಸಾಧನೆಯೋ ವೇದನೆಯೋ?

20 Nov 2025 11:16 PM IST

ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ, ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40 ರಷ್ಟು ಕಮಿಷನ್‌ ಹಾಗೂ ಭ್ರಷ್ಟಾಚಾರ ಆರೋಪಗಳನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಇಂದಿಗೆ (ನ.20) ತನ್ನ ಅರ್ಧ ಅವಧಿಯ (2.5 ವರ್ಷ) ಆಡಳಿತ ಪೂರ್ಣಗೊಳಿಸಿದೆ.ʼಸರ್ವ ಜನಾಂಗದ ಶಾಂತಿ ತೋಟʼ ಹೆಸರಿನಲ್ಲಿ ಘೋಷಿಸಿದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲೇ ಎರಡೂವರೆ ವರ್ಷ ಕಳೆದಿದೆ. ಆದರೆ, ಪ್ರಣಾಳಿಕೆಯಲ್ಲಿ ಗ್ಯಾರೆಂಟಿ ಯೋಜನೆ ಹೊರತುಪಡಿಸಿದ ಬಹಳಷ್ಟು ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಉಳಿದಿವೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿವಾದ, ನಾಯಕತ್ವ ಗೊಂದಲ, ಆಂತರಿಕ ಕಚ್ಛಾಟ, ಹಗರಣಗಳಲ್ಲಿ ಸಿಲುಕಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.