ಸರ್ಕಾರಿ ಉದ್ಯೋಗಕ್ಕೆ ಒಳ ಮೀಸಲಾತಿ ತಡೆ: ಕೋಚಿಂಗ್ ಸೆಂಟರ್ಗಳು ಕ್ಲೋಸ್, ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ
ರಾಜ್ಯ ಸರ್ಕಾರದ ನೇಮಕ ಪ್ರಕ್ರಿಯೆ ನಡೆಯದ ಕಾರಣ ಕಳೆದ ಒಂದು ವರ್ಷದಿಂದ ತರಬೇತಿ ಪಡೆಯುವವರ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗಿದ್ದು, ವಿದ್ಯಾರ್ಥಿಗಳನ್ನೇ ನಂಬಿಕೊಂಡಿದ್ದ ಚಂದ್ರಾಲೇಔಟ್ ಹಾಗೂ ವಿಜಯನಗರದ ಹಲವು ಸ್ಪರ್ಧಾತ್ಮಕ ಕೇಂದ್ರಗಳು ಸ್ಥಗಿತಗೊಂಡಿವೆ. ಇದರಿಂದ ಅಲ್ಲಿ ಬೋಧನೆ ಮಾಡುತ್ತಿದ್ದ ಶಿಕ್ಷಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸದಾ ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಪಿ.ಜಿಗಳಲ್ಲಿಯೂ ಸಂಖ್ಯೆ ಕುಸಿತಗೊಂಡಿರುವುದು ಮಾಲೀಕರಲ್ಲಿ ಆತಂಕ ಮೂಡಿಸಿದೆ.
