ಆಹಾರ ಅಭದ್ರತೆಗೆ ಕೀಟಗಳೇ ಪರಿಹಾರ; GKVK ವಿಜ್ಞಾನಿಗಳ ಅದ್ಭುತ ಆವಿಷ್ಕಾರ

16 Nov 2025 10:07 AM IST

ಕೀಟಗಳೆಂದರೆ ಭಯಪಡುತ್ತಿದ್ದ ಕಾಲ ಹೋಯ್ತು! ಈಗ ಅವೇ ನಮ್ಮ ಊಟದ ತಟ್ಟೆಗೆ ಬಂದಿವೆ.. ಬೆಂಗಳೂರಿನ ಜಿಕೆವಿಕೆ ಕೃಷಿ ಮೇಳದಲ್ಲಿ ಕಂಡುಬಂದ ಈ ದೃಶ್ಯ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಜಿರಳೆ ಪಕೋಡ, ಮಿಡತೆ ಕಬಾಬ್, ರೇಷ್ಮೆಹುಳು ಮಂಚೂರಿ... ಹೀಗೆ ಬಗೆಬಗೆಯ ಕೀಟ ಖಾದ್ಯಗಳು ಜನರ ಗಮನ ಸೆಳೆದವು. ಈ ವಿಡಿಯೋದಲ್ಲಿ, ಕೀಟಗಳನ್ನು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳು, ಭವಿಷ್ಯದ ಆಹಾರವಾಗಿ ಅವುಗಳ ಮಹತ್ವ, ಮತ್ತು ಈ ವಿನೂತನ ಪ್ರಯತ್ನದ ಬಗ್ಗೆ ರೈತರು ಹಾಗೂ ವಿಜ್ಞಾನಿಗಳ ಅಭಿಪ್ರಾಯವನ್ನು ನಾವು ನಿಮಗೆ ತೋರಿಸುತ್ತಿದ್ದೇವೆ. ಈ ವಿಚಿತ್ರ ಆದರೆ ಸತ್ಯವಾದ ಜಗತ್ತನ್ನು ನೋಡಲು ಸಿದ್ಧರಾಗಿ!