ಮಂಗಳೂರು-ಶೃಂಗೇರಿ-ಶಿವಮೊಗ್ಗ ರೈಲು ಯೋಜನೆಗೆ ಹೆಚ್ಚಿದ ವಿರೋಧ

17 Jun 2026 11:53 AM IST

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಪಶ್ಚಿಮ ಘಟ್ಟಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ರಸ್ತೆ ಸುರಂಗ, ಜಲವಿದ್ಯುತ್‌ ಯೋಜನೆ, ರೈಲ್ವೆ ಮಾರ್ಗ ಹಾಗೂ ಅಣುಸ್ಥಾವರಗಳನ್ನು ನಿರ್ಮಿಸಬೇಕು ಎಂಬ ಪ್ರಸ್ತಾವನೆಗೆ ಕೆಲವೊಂದಕ್ಕೆ ಅನುಮತಿ ನೀಡಿ ಕಾಮಗಾರಿ ಪ್ರಾರಂಭಿಸಲು ಸಿದ್ದತೆ ನಡೆಸಿವೆ.

ಆದರೆ ಈ ಕಾಮಗಾರಿಗಳ ವಿರುದ್ದ ಮಲೆನಾಡು ಹಾಗೂ ಕರಾವಳಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯೋನನೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊಸ ಯೋಜನೆಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಪಶ್ಚಿಮ ಘಟ್ಟದ ಸೂಕ್ಷ್ಮವಲಯಗಳಾದ ಶೆಟ್ಟಿಹಳ್ಳಿ, ಸೋಮೇಶ್ವರ, ಕುದುರೆಮುಖ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಿಗೆ ಹೆಚ್ಚು ಹಾನಿಯಾಗಲಿದ್ದು, ಸಸ್ಯ ಸಂಪತ್ತಿನ ಜೊತೆಗೆ ಪ್ರಾಣಿ ಸಂಪತ್ತು ನಾಶವಾಗಲಿದೆ.

ಈಗಾಗಲೇ ಕೈಗಾ ಅಣುಸ್ಥಾವರ ಸ್ಥಾಪಿಸಿರುವುದರಿಂದ ಸುತ್ತಮುತ್ತಲಿನ ಜನರು ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಕಾಳಿ ನದಿ ನೀರು ಕಲುಷಿತಗೊಂಡಿದೆ. ಇದೀಗ ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದ ಶರಾವತಿ ಕಣಿವೆ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವುದು ಪರಿಸರಕ್ಕೆ ಮತ್ತಷ್ಟು ಹಾನಿಯಾಗಲಿದೆ.