ಮೊದಲ ಮಹಾಯುದ್ಧದ ಹೈಫಾ ಕದನ ಗೆದ್ದ ''ಮೈಸೂರು ಲ್ಯಾನ್ಸರ್' ಯೋಧರ ಶೌರ್ಯ ಕಥೆ ಇಲ್ಲಿದೆ ಕೇಳಿ
ಯುರೋಪಿನ ನೆಲದಲ್ಲಿ ನಡೆದಿದ್ದ ಮೊದಲ ಮಹಾಯುದ್ಧಕ್ಕೂ, ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎಂದರೆ ಹಲವರಿಗೆ ಅಚ್ಚರಿಯಾಗಬಹುದು. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಈ ಮಹಾಸಮರದಲ್ಲಿ ಕನ್ನಡಿಗರ ಶೌರ್ಯ, ತ್ಯಾಗ ಮತ್ತು ಬಲಿದಾನದ ರೋಚಕ ಕಥೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ಅಂತಹ ಒಂದು ಸಾಹಸಗಾಥೆಯೇ ಇಂದು ಇಸ್ರೇಲ್‌ನಲ್ಲಿರುವ 'ಹೈಫಾ' ನಗರವನ್ನು ವೈರಿಗಳಿಂದ ವಿಮೋಚನೆಗೊಳಿಸಿದ ಕದನ. ಈ ಐತಿಹಾಸಿಕ ವಿಜಯದ ಸಂಕೇತವಾಗಿ ಪ್ರತಿ ವರ್ಷ ಸೆಪ್ಟೆಂಬರ್ 23 ರಂದು "ಹೈಫಾ ದಿನ" ಆಚರಿಸಲಾಗುತ್ತದೆ. ಅಂದ ಹಾಗೆ ಈ ಆಚರಣೆಯ ಕೇಂದ್ರಬಿಂದು ನಮ್ಮ ಬೆಂಗಳೂರಿನಲ್ಲೇ ಇದೆ!
