ದೆಹಲಿಯಲ್ಲಿ ಎಚ್‌ಡಿಕೆ ಚರ್ಚೆ: ಅಂಗನವಾಡಿ-ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಸಿಗುತ್ತಾ?: ವರಲಕ್ಷ್ಮಿ ಸಂದರ್ಶನ
ಕರ್ನಾಟಕ ಮತ್ತು ದೇಶಾದ್ಯಂತ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ, ನಿಯಮಿತ ಉದ್ಯೋಗ, ನಿವೃತ್ತಿ ವೇತನ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕೋರಿ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆಸಿದ್ದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡುತ್ತಾ, ಕುಮಾರಸ್ವಾಮಿಯವರಂತೆ ಕರ್ನಾಟಕದ ಉಳಿದ ಸಂಸದರು ಮತ್ತು ಕೇಂದ್ರ ಸಚಿವರು ಕೂಡ ತಮ್ಮ ಸಮಸ್ಯೆಗಳಿಗಾಗಿ ದನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ. ದೆಹಲಿ ಸಭೆಯ ಫಲಿತಾಂಶಗಳು, ಮುಂದಿನ ಕ್ರಮಗಳು ಮತ್ತು ಅಂಗನವಾಡಿ ಕಾರ್ಯಕರ್ತರ ಅಪೇಕ್ಷೆಗಳ ಕುರಿತು ಈ ವಿಶೇಷ ಸಂದರ್ಶನದಲ್ಲಿ ತಿಳಿಯಿರಿ.


