ಬೆಂಗಳೂರು ಕೆಂಗುಲಾಬಿಗೆ ಫುಲ್ ಡಿಮ್ಯಾಂಡ್; ವಿದೇಶಕ್ಕೆ ಹಾರುತ್ತಿರುವ ಹೂವುಗಳು! ರೈತರಿಗೆ ಸುಗ್ಗಿ
ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ತಾಜ್ ಮಹಲ್ ತಳಿಯ ಕೆಂಪು ಗುಲಾಬಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಒಂದು ಹೂವು ದಾಖಲೆಯ 54 ರೂ. ಗಿಂತ ಅಧಿಕ ಬೆಲೆಗೆ ಹರಾಜಾಗುತ್ತಿದೆ. ಹೆಬ್ಬಾಳದ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಿಂದ ಯುರೋಪ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಹೂವುಗಳು ರಫ್ತಾಗುತ್ತಿದ್ದು, ಬಯಲು ಸೀಮೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹೂವಿನ ಗುಣಮಟ್ಟ ಪರಿಶೀಲನೆ, ಡಿಜಿಟಲ್ ಹರಾಜು ಪ್ರಕ್ರಿಯೆ ಹಾಗೂ ವಿದೇಶಿ ರಫ್ತಿನ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.