1880ರಲ್ಲೇ ಮೊದಲ ತುಳು ತರಗತಿ! ಈಗ SSLCಗೂ ತುಳು ತೃತೀಯ ಭಾಷೆ, ಶೇ 100 ಪಾಸ್‌!Tharanath Gatti Kapikad Interview

23 March 2026 9:34 AM IST  ( Updated:2026-03-23 04:05:16  )

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ತಾರಾನಾಥ ಗಟ್ಟಿ ಕಾಪಿಕಾಡ್‌ ಅವರು ದ ಫೆಡರಲ್‌ ಕರ್ನಾಟಕ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಅಕಾಡೆಮಿ ವತಿಯಿಂದ ತುಳು ಸಾಹಿತ್ಯ, ಭಾಷೆ , ಸಂಸ್ಕೃತಿಗೆ ಆಗುತ್ತಿರುವ ಮಹತ್ತರ ಕಾರ್ಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಅವರ ಜತೆ ಮಾತುಕತೆಯ ಪಾಡ್‌ಕಾಸ್ಟ್‌ ನ ಮೊದಲ ಭಾಗ ಇಲ್ಲಿದೆ. ತುಳುನಾಡಿನವರೇ ಅದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಕಾಲದಲ್ಲಿ ತುಳುವಿಗಾಗಿ ಆರಂಭವಾದ ತುಳು ಸಾಹಿತ್ಯ ಆಕಾಡೆಮಿ ತುಳುವಿಗಾಗಿ ಸತತ ಕೆಲಸ ಮಾಡುತ್ತಲೇ ಬಂದಿದೆ ಎಂದು ಕಾಪಿಕಾಡ್‌ ಹೇಳಿದ್ದಾರೆ. ತುಳು ಭಾಷೆಗೆ ಸುಮಾರು ಮೂರು ಸಾವಿರ ವರ್ಷಗಳಿಗಿಂತಲೂ ಹಳೆಯ ಸಂಸ್ಕೃತಿಯಿದ್ದು, ಇದೊಂದು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂಬದುಕ್ಕೆ ಹಲವಾರು ದಾಖಲೆಗಳಿದ್ದಾವೆ. ಹಲವು ಭಾಷಾ ತಜ್ಞರು ಈ ಬಗ್ಗೆ ಸಂಶೋಧನೆಗಳನ್ನು ಮಾಡಿದ್ದಾರೆ. ತುಳುವಿನ ಬಗ್ಗೆ ಬಾಸೆಲ್‌ ಮಿಷನ್‌ ಸಂಸ್ಥೆ ೧೮೮೦ರ ಕಾಲಘಟ್ಟದಲ್ಲೇ ಹಲವು ಗ್ರಂಥಗಳನ್ನು ಪ್ರಕಟಿಸಿದೆ. ಅನೇಕ ಶಾಸನಗಳಲ್ಲಿ ತುಳು ಭಾಷೆಯ ಲಿಪಿ ಪತ್ತೆಯಾಗಿವೆ ಅಥವಾ ತುಳು ಬಗ್ಗೆ ವಿವರಿಸಲಾಗಿದೆ ಎಂದು ದಾಖಲೆಗಳ ಸಮೇತ ಕಾಪಿಕಾಡ್‌ ವಿವರಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಐತಿಹಾಸಿಕವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕಳೆದ 30 ವರ್ಷಗಳಲ್ಲಿ ಸುಮಾರು 300 ಪುಸ್ತಕಗಳನ್ನು ತುಳುವಿಗೆ ಸಂಬಂಧಪಟ್ಟ ಬೇರೆಬೇರೆ ವಿಚಾರಗಳ ಮೇಲೆ ಪ್ರಕಟಿಸಿದ್ದೇವೆ . ತುಳು ಬರವಣಿಗೆ ಕಮ್ಮಟಗಳು, ತುಳು ನಾಟಕ ಬರವಣಿಗೆ ಕಮ್ಮಟಗಳು ಅಥವಾ ತುಳು ಹಾಡುಗಳ ಬರವಣಿಗೆ ಕಮ್ಮಟಗಳು ಈ ರೀತಿಯಾಗಿ ಅನೇಕ ಕೆಲಸಗಳಾಗಿವೆ. ದಕ್ಷಿಣ ಕನ್ನಡ ಇರಬಹುದು ಉಡುಪಿ ಇರಬಹುದು ಕಾಸರಗೋಡು ಇರಬಹುದು ಮತ್ತು ಅದರಾಚೆಗಿನ ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ , ಅಷ್ಟೇ ಏಕೆ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ಇತರ ದೇಶಗಳಲ್ಲೂ ತುಳು ಕೆಲಸಗಳು ನಡೆಯುತ್ತಿವೆ. ಅದಕ್ಕೆ ಅಕಾಡೆಮಿ ಒಂದು ಕೊಂಡಿಯಾಗಲು ಪ್ರಯತ್ನಿಸುತ್ತಿದೆ ಎಂದರು. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿರುವ ಕಾಪಿಕಾಡ್‌ ಅವರ ಸಂಪೂರ್ಣ ಸಂದರ್ಶನದ ವಿವರಕ್ಕಾಗಿ ವಿಡಿಯೋ ನೋಡಿ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ತಾರಾನಾಥ ಗಟ್ಟಿ ಕಾಪಿಕಾಡ್‌ ಅವರು ದ ಫೆಡರಲ್‌ ಕರ್ನಾಟಕ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಅಕಾಡೆಮಿ ವತಿಯಿಂದ ತುಳು ಸಾಹಿತ್ಯ, ಭಾಷೆ , ಸಂಸ್ಕೃತಿಗೆ ಆಗುತ್ತಿರುವ ಮಹತ್ತರ ಕಾರ್ಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಅವರ ಜತೆ ಮಾತುಕತೆಯ ಪಾಡ್‌ಕಾಸ್ಟ್‌ ನ ಮೊದಲ ಭಾಗ ಇಲ್ಲಿದೆ.

ತುಳುನಾಡಿನವರೇ ಅದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಕಾಲದಲ್ಲಿ ತುಳುವಿಗಾಗಿ ಆರಂಭವಾದ ತುಳು ಸಾಹಿತ್ಯ ಆಕಾಡೆಮಿ ತುಳುವಿಗಾಗಿ ಸತತ ಕೆಲಸ ಮಾಡುತ್ತಲೇ ಬಂದಿದೆ ಎಂದು ಕಾಪಿಕಾಡ್‌ ಹೇಳಿದ್ದಾರೆ. ತುಳು ಭಾಷೆಗೆ ಸುಮಾರು ಮೂರು ಸಾವಿರ ವರ್ಷಗಳಿಗಿಂತಲೂ ಹಳೆಯ ಸಂಸ್ಕೃತಿಯಿದ್ದು, ಇದೊಂದು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂಬದುಕ್ಕೆ ಹಲವಾರು ದಾಖಲೆಗಳಿದ್ದಾವೆ. ಹಲವು ಭಾಷಾ ತಜ್ಞರು ಈ ಬಗ್ಗೆ ಸಂಶೋಧನೆಗಳನ್ನು ಮಾಡಿದ್ದಾರೆ. ತುಳುವಿನ ಬಗ್ಗೆ ಬಾಸೆಲ್‌ ಮಿಷನ್‌ ಸಂಸ್ಥೆ ೧೮೮೦ರ ಕಾಲಘಟ್ಟದಲ್ಲೇ ಹಲವು ಗ್ರಂಥಗಳನ್ನು ಪ್ರಕಟಿಸಿದೆ. ಅನೇಕ ಶಾಸನಗಳಲ್ಲಿ ತುಳು ಭಾಷೆಯ ಲಿಪಿ ಪತ್ತೆಯಾಗಿವೆ ಅಥವಾ ತುಳು ಬಗ್ಗೆ ವಿವರಿಸಲಾಗಿದೆ ಎಂದು ದಾಖಲೆಗಳ ಸಮೇತ ಕಾಪಿಕಾಡ್‌ ವಿವರಿಸಿದ್ದಾರೆ.

ತುಳು ಸಾಹಿತ್ಯ ಅಕಾಡೆಮಿ ಐತಿಹಾಸಿಕವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕಳೆದ 30 ವರ್ಷಗಳಲ್ಲಿ ಸುಮಾರು 300 ಪುಸ್ತಕಗಳನ್ನು ತುಳುವಿಗೆ ಸಂಬಂಧಪಟ್ಟ ಬೇರೆಬೇರೆ ವಿಚಾರಗಳ ಮೇಲೆ ಪ್ರಕಟಿಸಿದ್ದೇವೆ . ತುಳು ಬರವಣಿಗೆ ಕಮ್ಮಟಗಳು, ತುಳು ನಾಟಕ ಬರವಣಿಗೆ ಕಮ್ಮಟಗಳು ಅಥವಾ ತುಳು ಹಾಡುಗಳ ಬರವಣಿಗೆ ಕಮ್ಮಟಗಳು ಈ ರೀತಿಯಾಗಿ ಅನೇಕ ಕೆಲಸಗಳಾಗಿವೆ. ದಕ್ಷಿಣ ಕನ್ನಡ ಇರಬಹುದು ಉಡುಪಿ ಇರಬಹುದು ಕಾಸರಗೋಡು ಇರಬಹುದು ಮತ್ತು ಅದರಾಚೆಗಿನ ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ , ಅಷ್ಟೇ ಏಕೆ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ಇತರ ದೇಶಗಳಲ್ಲೂ ತುಳು ಕೆಲಸಗಳು ನಡೆಯುತ್ತಿವೆ. ಅದಕ್ಕೆ ಅಕಾಡೆಮಿ ಒಂದು ಕೊಂಡಿಯಾಗಲು ಪ್ರಯತ್ನಿಸುತ್ತಿದೆ ಎಂದರು.

ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿರುವ ಕಾಪಿಕಾಡ್‌ ಅವರ ಸಂಪೂರ್ಣ ಸಂದರ್ಶನದ ವಿವರಕ್ಕಾಗಿ ವಿಡಿಯೋ ನೋಡಿ.