ಗ್ರಾಮ ಪಂಚಾಯತಿ ಕಾಮಗಾರಿಗಳ ದಾಖಲೆ ಪಡೆಯಲು 38 ಸಾವಿರ ಪಾವತಿಸಿದ ರೈತ
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ದಾಖಲೆ ತುಂಬಿಕೊಂಡು ಹೋಗಲು ಎತ್ತಿನ ಗಾಡಿ ತಂದ ಬಸವನಹಳ್ಳಿ ಗ್ರಾಮದ ರೈತ ರವಿ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. 2020 ರಿಂದ 2025 ರವರೆಗಿನ 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ದಾಖಲೆ ಕೇಳಿದ್ದ ರೈತ ರವಿ. ಒಟ್ಟು 13770 ಪ್ರತಿಗಳನ್ನು ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ಹೋದ ರೈತ ರವಿ. ದಾಖಲೆ ಪಡೆಯಲು ಹಣ ಕಟ್ಟಲು ಒಂದು ಹಸು ಮಾರಿ ದಾಖಲೆ ಪಡೆದ ರೈತ ರವಿಯ ಕಥೆ.


