REALITY CHECK | ಟಾರ್ಪಲ್ ಅಡಿಯಲ್ಲೇ ಮಕ್ಕಳ ವಾಸ! 3 ತಿಂಗಳ ನಂತರವೂ ಯಲಹಂಕದ ಫಕೀರ್ ಲೇಔಟ್‌ನಲ್ಲಿ ಬದಲಾಗದ ಸ್ಥಿತಿ!
ಕಳೆದ ಮೂರು ತಿಂಗಳ ಹಿಂದೆ ಕೋಗಿಲು ಬಡಾವಣೆಯ ಫಕೀರ್ ಲೇಔಟ್ ಒತ್ತುವರಿ ತೆರವು ಪ್ರಕರಣ ಇಡೀ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿತ್ತು. ಅಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಈ ತೆರವು ಕಾರ್ಯಾಚರಣೆಯನ್ನು ಖಂಡಿಸಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವಾರದಲ್ಲಿ ಮನೆ ನೀಡುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಆ ಭರವಸೆ ಈಡೇರಿಲ್ಲ. ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮನೆ ಹಂಚಿಕೆಯ ಫೋಟೋಗಳನ್ನು ಹಂಚಿಕೊಂಡಿದ್ದರು, ಆದರೆ ಅದು ವಸೀಂ ಬಡಾವಣೆಯ ನಿವಾಸಿಗಳಿಗೆ ನೀಡಲಾದ ಮನೆಗಳೇ ಹೊರತು ಫಕೀರ್ ಲೇಔಟ್‌ನವರಿಗಲ್ಲ. ಕಾನೂನು ತೊಡಕು ಮತ್ತು ರಾಜಕೀಯ ಜಟಾಪಟಿಯ ನಡುವೆ ಇಲ್ಲಿನ ಮಹಿಳೆಯರು ಮತ್ತು ಮಕ್ಕಳು ಇಂದಿಗೂ ಟಾರ್ಪಲ್ ಹಾಕಿಕೊಂಡು ಬೀದಿಯಲ್ಲೇ ವಾಸಿಸುತ್ತಿದ್ದಾರೆ. "ಮನೆ ಹಂಚಿಕೆಯಾಗದೆ ನಾವು ಇಲ್ಲಿಂದ ಕದಲುವುದಿಲ್ಲ" ಎಂದು ಪಟ್ಟು ಹಿಡಿದಿರುವ ಜನರ ಸ್ಥಿತಿಗತಿಯ ಬಗ್ಗೆ 'ದ ಫೆಡರಲ್ ಕರ್ನಾಟಕ' ನಡೆಸಿದ ವಿಶೇಷ ಗ್ರೌಂಡ್ ರಿಪೋರ್ಟ್ ಇಲ್ಲಿದೆ.