EPFO ಮಹತ್ವದ ನಿರ್ಧಾರ: ಶಿಕ್ಷಣ, ಮದುವೆಗೆ ಈಗ 100% ಪಿಎಫ್ ಹಣವನ್ನು ವಾಪಸ್​ ಪಡೆಯಿರಿ

14 Oct 2025 11:29 AM IST

ಭವಿಷ್ಯ ನಿಧಿ (PF) ಖಾತೆದಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದು, ಇನ್ನು ಮುಂದೆ ಚಂದಾದಾರರು ತಮ್ಮ ಪಿಎಫ್ ಖಾತೆಯಿಂದ 100% ವರೆಗೆ ಹಣವನ್ನು ಭಾಗಶಃ ಹಿಂಪಡೆಯಲು ಅವಕಾಶ ಕಲ್ಪಿಸಿದೆ. ಈ ವಿಡಿಯೋದಲ್ಲಿ, ಈ ಹೊಸ ನಿಯಮಗಳ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ.