ಸುರಂಗ ಮಾರ್ಗ ಬೇಡವೇ ಬೇಡ! ಇದು ಬೆಂಗಳೂರಿನ ಭೂಗರ್ಭಕ್ಕೆ ಮಾರಕ : ಪ್ರೊ. ರೇಣುಕಾ ಪ್ರಸಾದ್ ಎಚ್ಚರಿಕೆ

1 Dec 2025 9:59 AM IST

ನಗರದ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸರ್ಕಾರ ಉದ್ದೇಶಿಸಿರುವ ಬಹುನಿರೀಕ್ಷಿತ ಸುರಂಗ ಮಾರ್ಗ ಯೋಜನೆಯು ಇದೀಗ ತೀವ್ರ ವಿವಾದದ ಕೇಂದ್ರಬಿಂದುವಾಗಿದೆ. ಅದರಲ್ಲೂ ಮುಖ್ಯವಾಗಿ, ಲಾಲ್‌ಬಾಗ್ ಮೂಲಕ ಹಾದುಹೋಗುವ ಯೋಜನೆಯ ಭಾಗವು ಬೆಂಗಳೂರಿನ ಪುರಾತನ ಭೂವೈಜ್ಞಾನಿಕ ಪರಂಪರೆ ಮತ್ತು ಅಂತರ್ಜಲ ವ್ಯವಸ್ಥೆಗೆ ಮಾರಕವಾಗಲಿದೆ ಎಂದು ಜಲವಿಜ್ಞಾನಿಗಳು, ಭೂ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.