ಕಬ್ಬಿನ ರಿಕವರಿ ನಿಗದಿ, ತೂಕದಲ್ಲಿ ಮೋಸದ ಜತೆಗೆ ಸಕ್ಕರೆ ಕಾರ್ಖಾನೆಗಳ ರಾಜಕೀಯ ಲಾಬಿಯಿಂದ ಬೆಳೆಗಾರರಿಗೆ ಹಿನ್ನಡೆ ಎಂದ ಡೊಂಗರಗಾಂವ

9 Nov 2025 10:21 AM IST

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಬೆಲೆ ನಿಗದಿಗೆ ಆಗ್ರಹಿಸಿ ಪ್ರತಿಭಟನೆಯ ಬಿಸಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ 7 ಗಂಟೆಗಳ ಸಭೆ ನಡೆಸಿ ಬೆಲೆ ನಿಗದಿ ಬಗ್ಗೆ ಪರಿಹಾರ ರೂಪಿಸಿದ್ದರು. ಆದರೆ ಇದನ್ನು ಹೊರತುಪಡಿಸಿ ಕಬ್ಬು ಬೆಳೆಯುವ ರೈತರಿಗೆ ಯಾವ ರೀತಿ ಮೋಸವಾಗುತ್ತಿದೆ , ಸಕ್ಕರೆ ಕಾರ್ಖಾನೆ ಮಾಲೀಕರು ಹೇಗೆ ರೈತರಿಗೆ ಮೋಸ ಮಾಡುವ ಸಾಧ್ಯತೆ ಇದೆ ಎನ್ನುವುದನ್ನು ರೈತ ಹೋರಾಟಗಾರ ಹಾಗು ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ವಿವರಿಸಿದ್ದಾರೆ.