Breast Cancer| ರೋಗಿಗಳಲ್ಲಿ ಮನೋಸ್ಥೈರ್ಯವಿದ್ದರೆ ಅರ್ಧ ಕಾಯಿಲೆ ವಾಸಿಯಾದಂತೆ: ಕಿದ್ವಾಯಿ ತಜ್ಞೆ ಡಾ. ಸ್ಮಿತಾ ಸಾಲ್ದಾನಾ

22 Oct 2025 4:17 PM IST

“ಸಂಕೋಚ ತೊರೆದು, ಸಮಯಕ್ಕೆ ಸರಿಯಾಗಿ ತಪಾಸಣೆಗೆ ಒಳಗಾದರೆ ಸ್ತನ ಕ್ಯಾನ್ಸರ್ ಪ್ರಾಣಹಾನಿಯಲ್ಲ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗಮುಕ್ತ, ಭಯಮುಕ್ತ ಜೀವನ ನಿಮ್ಮದಾಗಲಿದೆ"... ಹೀಗೆ ಹೇಳುತ್ತಲೇ ಸ್ತನ ಕ್ಯಾನ್ಸರ್ ಅಪಾಯ, ಆತಂಕಗಳ ಜೊತೆಗೆ ಜಾಗೃತಿಯ ಪಾಠ ಹೇಳಿಕೊಟ್ಟಿದ್ದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಸಾಲ್ಡಾನ. ಸ್ತನ ಕ್ಯಾನ್ಸರ್‌ ಕುರಿತು ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.