ಸಿದ್ದರಾಮಯ್ಯರ 'ಚಕ್ರವ್ಯೂಹ'ಕ್ಕೆ ಡಿಕೆಶಿ ತತ್ತರ? ಸಿಎಂ ರೇಸ್‌ನಿಂದ ಹೊರಗಿಡಲು ಮಾಸ್ಟರ್‌ಪ್ಲ್ಯಾನ್!
ಕರ್ನಾಟಕ ರಾಜಕೀಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ಸ್ಫೋಟಕ ಹಂತ ತಲುಪಿದೆ. ಮುಖ್ಯಮಂತ್ರಿ ಪದವಿಯ ಕನಸು ಕಾಣುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೊಂದು ರೀತಿಯಲ್ಲಿ ಟೆನ್ಷನ್ ಹೆಚ್ಚಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ರಣತಂತ್ರಕ್ಕೆ ಬೇಸತ್ತಿರುವ ಡಿ.ಕೆ. ಶಿವಕುಮಾರ್, ಪದೇ ಪದೇ ಹೈಕಮಾಂಡ್ ಅಂಗಳಕ್ಕೆ ದೂರು ಕೊಂಡೊಯ್ಯುತ್ತಿರುವುದೇಕೆ? ಸಿದ್ದರಾಮಯ್ಯ ಹೆಣೆದಿರುವ ಈ 'ಚಕ್ರವ್ಯೂಹ'ದಿಂದ ಡಿಕೆಶಿ ಹೊರಬರಲು ಸಾಧ್ಯವೇ? ಈ ಸಂಚಿಕೆಯಲ್ಲಿ, ತೆರೆಮರೆಯಲ್ಲಿ ನಡೆಯುತ್ತಿರುವ ಈ ರಾಜಕೀಯ ಪಗಡೆಯಾಟವನ್ನು ನಾವು ವಿಶ್ಲೇಷಿಸಿದ್ದೇವೆ.


