ಥಿಯೇಟರ್​ಗಳಲ್ಲಿ 'ಡೆವಿಲ್' ದರ್ಬಾರ್! ಫ್ಯಾನ್ಸ್ ರೆಸ್ಪಾನ್ಸ್ ನೋಡಿದ್ರೆ ಬೆಚ್ಚಿ ಬೀಳೋದು ಖಚಿತ!

11 Dec 2025 1:46 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಬಹುನಿರೀಕ್ಷಿತ 'ದಿ ಡೆವಿಲ್' (The Devil) ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ (Nartaki Theatre) ಬೆಳ್ಳಂಬೆಳಗ್ಗೆ 6:30ಕ್ಕೆ ಆರಂಭವಾದ ಫಸ್ಟ್ ಡೇ ಫಸ್ಟ್ ಶೋ (FDFS) ವೀಕ್ಷಿಸಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಮುಗಿಬಿದ್ದಿದ್ದರು. ಸಿನಿಮಾ ಮುಗಿಸಿ ಹೊರಬಂದ ಪ್ರೇಕ್ಷಕರಿಂದ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ, ಟಾಪ್ ಟು ಬಾಟಮ್ ಕಮರ್ಷಿಯಲ್ ಎಂಟರ್ಟೈನರ್" ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಡಿ ಬಾಸ್ (DBoss) ಅವರ ಡಬಲ್ ಆಕ್ಷನ್ ಧಮಾಕಾ, ಮಾಸ್ ಡೈಲಾಗ್‌ಗಳು ಮತ್ತು ಬೆಂಕಿಯಂತಹ ಆಕ್ಷನ್ ಸೀನ್‌ಗಳನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.