ದೇವರಾಜು ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿದ್ದರಾಮಯ್ಯ: ಬೆಂಬಲಿಗರಿಂದ ನಾಟಿಕೋಳಿ ಊಟದ ಆಯೋಜನೆ
ಕರ್ನಾಟಕದ ಮಾಜಿ ಸಿಎಂ ದೇವರಾಜು ಅರಸು ಅವರು 7 ವರ್ಷ 7 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ದೀರ್ಘಾವಧಿಯ ಮುಖ್ಯಮಂತ್ರಿಗಳ ದಾಖಲೆ ಬರೆಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರು ಆ ದಾಖಲೆಯನ್ನು ಮುರಿಯಲಿದ್ದು, ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಯುವ ಅಹಿಂದಾ ಒಕ್ಕೂಟದ ಕಾರ್ಯಕರ್ತರು ನಾಟಿಕೋಳಿ ಭೋಜನ ಆಯೋಜಿಸಿದ್ದಾರೆ. ಜನವರಿ 5ರಂದು ಈ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದ ಹಿಂದೆ ಅಹಿಂದಾ ಸಮುದಾಯದ ರಾಜಕೀಯ ಸಂದೇಶವೂ ಅಡಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರವಾಗಿದೆ.