ಡೆಂಗ್ಯೂ ಚಿಕಿತ್ಸೆ: ಸರ್ಕಾರ ಹೇಳಿದ್ದೇನು, ಅಸಲಿಗೆ ಕಂಡಿದ್ದೇನು ?
ಒಂದು ಕಡೆ ರಾಜ್ಯ ಆರೋಗ್ಯ ಇಲಾಖೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ನಿಯಂತ್ರಣದಲ್ಲಿವೆ, ಈವರೆಗೆ ಬೆರಳೆಣಿಕೆ ಸಾವು ಸಂಭವಿಸಿವೆ, ಪಾಸಿಟಿವ್ ಪ್ರಕರಣಗಳೂ ನಾಲ್ಕೈದು ಸಾವಿರ ಮಿತಿಯಲ್ಲಿವೆ ಎಂದು ಹೇಳುತ್ತಿದೆ. ಆದರೆ, ಬೆಂಗಳೂರು ಮಹಾನಗರದಿಂದ ರಾಜ್ಯದ ಬೀದರ್ ಮೂಲೆಯ ತಾಲೂಕು ಆಸ್ಪತ್ರೆಯ ವರೆಗೆ ಡೆಂಗ್ಯೂ ಸೋಂಕಿತರ ಗೋಳುಗಳು ಸುದ್ದಿಯಾಗುತ್ತಲೇ ಇವೆ. ಹಾಗಾದರೆ, ವಾಸ್ತವ ಏನು? ಸರ್ಕಾರ ಏನು ಕ್ರಮ ಕೈಗೊಂಡಿದೆ? ಚಿಕಿತ್ಸೆ ಹೇಗೆ ನಡೆಯುತ್ತಿದೆ? ಎಂಬ ಮಾಹಿತಿ ಕೆದಕಿ 'ದ ಫೆಡರಲ್ ಕರ್ನಾಟಕ' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡದ್ದು ಬೇರೆಯದೇ ಚಿತ್ರಣ.