LIVE | CWC ಸಭೆ ಮುಗಿಸಿ ಖಾಲಿ ಕೈಲಿ ಮರಳಿದ ಸಿಎಂ! ಸಂಪುಟ ಪುನಾರಚನೆ ಕಥೆ ಏನಾಯ್ತು? ಆಕಾಂಕ್ಷಿಗಳಿಗೆ ಬಿಗ್ ಶಾಕ್!

27 Dec 2025 6:49 PM IST

ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯು ರಾಜ್ಯ ರಾಜಕಾರಣದ ದೃಷ್ಟಿಯಿಂದ ಕುತೂಹಲ ಮೂಡಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರವಾಸದ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟ ಪುನಾರಚನೆ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯ ಬಗ್ಗೆ ಚರ್ಚಿಸುವ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ದೆಹಲಿಯಲ್ಲಿ ನಡೆದಿದ್ದೇ ಬೇರೆ! ಇಡೀ ಸಭೆಯು ಕೇಂದ್ರ ಸರ್ಕಾರದ ಎಂಜಿಎನ್‌ಆರ್‌ಇಜಿಎ (MGNREGA) ನೀತಿಗಳ ವಿರುದ್ಧದ ಹೋರಾಟ ಮತ್ತು ರಾಷ್ಟ್ರೀಯ ಅಜೆಂಡಾಗಳಿಗೆ ಸೀಮಿತವಾಯಿತು. ಸಭೆಯ ನಂತರ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಲು ಸಿಎಂ ಮುಂದಾಗಿದ್ದರೂ, ರಾಜ್ಯ ರಾಜಕಾರಣದ ವಿಚಾರವಾಗಿ ಯಾವುದೇ ಮಹತ್ವದ ಮಾತುಕತೆ ನಡೆದಿಲ್ಲ ಎನ್ನಲಾಗಿದೆ.