Save Lalbagh| ಪಕ್ಷಿ, ಮರಗಳು, ಪುರಾತನ ಬಂಡೆಗೆ ತೊಂದರೆಯಾಗುವ ಆತಂಕ
ಬೆಂಗಳೂರಿನ ಶ್ವಾಸತಾಣ ಲಾಲ್‌ಬಾಗ್ ಪರಿಸರದಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡುವುದರಿಂದ ಬೆಂಗಳೂರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ, ಪುರಾತನ ಬಂಡೆಯನ್ನು ಕೊರೆದು ಸುರಂಗ ನಿರ್ಮಿಸಿದರೆ ಭೂತಳದ ನೀರಿನ ಸೆಲೆಗಳಿಗೆ ಹಾನಿಯಾಗಲಿದೆ. ಜತೆಗೆ ಬಂಡೆ ಕೊರೆಯುವ ಮುನ್ನ ಕಾರ್ಯಸಾಧ್ಯತೆ, ಅಪಾಯಗಳ ಕುರಿತು ಅಧ್ಯಯನ ನಡೆಸಬೇಕು. ಜೀವವೈದ್ಯತೆಯ ತಾಣವಾಗಿರುವ ಲಾಲ್‌ಬಾಗ್‌ನಲ್ಲಿ ಸುರಂಗ ನಿರ್ಮಿಸುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎಂಬುದು ನಗರ ತಜ್ಞರ ಅಭಿಮತವಾಗಿದೆ.


