ಕೊಚ್ಚೆ ನೀರಿನಿಂದ ಕಾಲೇಜು ವಿದ್ಯಾರ್ಥಿನಿಯರ ಪರದಾಟ: ಡೋಂಟ್ ಕೇರ್ ಅಂದ ಆಡಳಿತ
ಬೆಂಗಳೂರಿನ ಹೃದಯಭಾಗದಲ್ಲಿ ನರಕ ಸದೃಶ ದೃಶ್ಯ: ವಿಧಾನಸೌಧದ ಕೂಗಳತೆಯಲ್ಲೇ ಹರಿಯುತ್ತಿದೆ ಕೊಚ್ಚೆ ನೀರು. ಬೆಂಗಳೂರನ್ನು ಸಿಲಿಕಾನ್ ಸಿಟಿ ಎನ್ನುತ್ತೇವೆ, ಆದರೆ ರಾಜಧಾನಿಯ ಹೃದಯಭಾಗದ ಪರಿಸ್ಥಿತಿ ನೋಡಿದರೆ ಅಸಹ್ಯವಾಗುತ್ತದೆ. ವಿಧಾನಸೌಧದಿಂದ ಕೇವಲ ಕೆಲವೇ ಮೀಟರ್ ದೂರದಲ್ಲಿರುವ ಪ್ರೀಡಂ ಪಾರ್ಕ್ ಸರ್ಕಲ್ ಬಳಿ ಕಳೆದ ಒಂದು ತಿಂಗಳಿಂದ ಕೊಚ್ಚೆ ನೀರು ರಾಜಾರೋಷವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಮಹಾರಾಣಿ ಕಾಲೇಜು, ಎಸ್.ಜೆ.ಪಿ ಮತ್ತು ಹೋಮ್ ಸೈನ್ಸ್ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಇದೇ ರಸ್ತೆಯಲ್ಲಿ ಓಡಾಡಬೇಕು. ಇಲ್ಲಿ ಕೇವಲ ಕೊಚ್ಚೆ ಹರಿಯುತ್ತಿಲ್ಲ, ಬದಲಾಗಿ ನೀರು ನಿಂತು ಪಾಚಿ ಕಟ್ಟಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಂಡು, ಈ ಹೊಲಸು ನೀರನ್ನು ದಾಟಿಕೊಂಡು ಹೋಗುವ ದುಸ್ಥಿತಿ ಎದುರಾಗಿದೆ. ಚುನಾವಣಾ ಆಯೋಗದ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು ಇಲ್ಲೇ ಇದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.