Christmas Vibes | ಬೆಂಗಳೂರಿನ ಕ್ರಿಸ್‌ಮಸ್‌ ವೈಬ್ ಹೇಗಿದೆ ಗೊತ್ತಾ?

25 Dec 2025 12:44 AM IST

ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ವೈಬ್ ಅಂದ್ರೆ ಅದು ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್ ರೋಡ್. ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವ ಈ ರಸ್ತೆಗಳು ದೀಪಲಂಕಾರದಿಂದ ಮಿರ ಮಿರ ಮಿರುಗುತ್ತಿವೆ. ಯುವಜನತೆಯಂತೂ ಸಖತ್ ಎಂಜಾಯ್ ಮಾಡ್ತಿದ್ದಾರೆ. ಯುವಕ-ಯುವತಿಯರು ಸಂತಾ ಕ್ಲಾಸ್ ಹೇರ್‌ಬ್ಯಾಂಡ್‌ ಧರಿಸಿ ಮಿಂಚುತ್ತಿದ್ದಾರೆ.

ಕ್ರಿಸ್‌ಮಸ್‌ ಅಂದಾಕ್ಷಣ ಮೊದಲು ನೆನಪಾಗುವುದೇ ಚರ್ಚ್‌ಗಳು. ಬೆಂಗಳೂರಿನ ಪ್ರಮುಖ ಚರ್ಚ್‌ಗಳು, ಕ್ರಿಶ್ಚಿಯನ್‌ ಸಮುದಾಯದ ಶಾಲಾ ಕಾಲೇಜುಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಕ್ರಿಸ್‌ಮಸ್‌ ಹಿನ್ನೆಲೆ ಕ್ರೈಸ್ತ ಸಮುದಾಯದವರು ಕುಟುಂಬಗಳ ಸಮೇತ ಚರ್ಚ್‌ಗಳಿಗೆ ಭೇಟಿ ನೀಡುತ್ತಿದ್ದು, ಏಸುಕ್ರಿಸ್ತನ ಆರಾಧನೆಯಲ್ಲಿ ಪಾಲ್ಗೊಂಡಿದ್ದಾರೆ. ಬುಧವಾರ ರಾತ್ರಿಯಿಂದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಆರಂಭವಾಗಿದೆ. ಕ್ರೈಸ್ತ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ.