ಸಾರಿಗೆ ನೌಕರರಿಂದ ಸರ್ಕಾರಕ್ಕೆ ಅಂತಿಮ ಗಡುವು; ನೋಟಿಸ್‌ ನೀಡದೇ ಸಾಮೂಹಿಕ ಗೈರಿಗೆ ತೀರ್ಮಾನ

28 Jan 2026 7:06 PM IST

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕೆ ಮುಂದಾಗಿದ್ದಾರೆ.‌ ವೇತನ ಪರಿಷ್ಕರಣೆ ಹಾಗು ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಾಳೆ ಅಂದರೆ ಜನವರಿ 29ರಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಗಳೂರು ಚಲೋ ನಡೆಸುತ್ತಿದೆ. ನಾಳೆ ಪ್ರೀಡಂಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.‌ನಾಳೆ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಆದರೆ ನಾಳೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದು ಸರ್ಕಾರ ಸ್ಪಂದಿಸಲಿಲ್ಲ ಅಂದರೆ ನೋಟಿಸ್ ನೀಡದೆ ಕೆಲಸಕ್ಕೆ ಗೈರಾಗುವ ಎಚ್ಚರಿಕೆ ನೀಡಿದೆ.

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕೆ ಮುಂದಾಗಿದ್ದಾರೆ.‌ ವೇತನ ಪರಿಷ್ಕರಣೆ ಹಾಗು ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಾಳೆ ಅಂದರೆ ಜನವರಿ 29ರಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಗಳೂರು ಚಲೋ ನಡೆಸುತ್ತಿದೆ. ನಾಳೆ ಪ್ರೀಡಂಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.‌ನಾಳೆ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಆದರೆ ನಾಳೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದು ಸರ್ಕಾರ ಸ್ಪಂದಿಸಲಿಲ್ಲ ಅಂದರೆ ನೋಟಿಸ್ ನೀಡದೆ ಕೆಲಸಕ್ಕೆ ಗೈರಾಗುವ ಎಚ್ಚರಿಕೆ ನೀಡಿದೆ. ಸಾರಿಗೆ ನೌಕರರ ಹೋರಾಟ ಹಾಗು ಪ್ರತಿಭಟನೆ ಬಗ್ಗೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ಡಿ.ಎಂ. ವಿಜಯ ಭಾಸ್ಕರ್ ಅವರು ʼದ ಫೆಡರಲ್ ಕರ್ನಾಟಕʼ ದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ