ಅಧಿಕಾರ ಹಂಚಿಕೆ ಚರ್ಚೆ ಬೆನ್ನಲ್ಲೇ ಡಿಕೆಶಿಯಿಂದ ಬಿಜೆಪಿಯ 'ಆಫರ್' ಬಾಂಬ್: ಸಿಎಂ ಕುರ್ಚಿಗಾಗಿ ಹೊಸ ದಾಳವೇ?

17 Oct 2025 6:00 PM IST

ಸಮ್ಮಿಶ್ರ ಸರ್ಕಾರದ ಪತನದ ವೇಳೆ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಬಂದಿತ್ತು, ಆದರೆ ನಾನು ಪಕ್ಷನಿಷ್ಠೆಗಾಗಿ ಜೈಲು ಪಾಲಾಗಲು ಸಿದ್ಧನಾದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ತಾರಕಕ್ಕೇರಿರುವ ಈ ಸಂದರ್ಭದಲ್ಲೇ ಡಿಕೆಶಿ ಈ ಮಾತು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇದು ಕೇವಲ ಪಕ್ಷನಿಷ್ಠೆಯ ಪ್ರದರ್ಶನವೇ? ಅಥವಾ ತಮ್ಮ ವಿರೋಧಿಗಳಿಗೆ ನೀಡಿದ ರಾಜಕೀಯ ಸಂದೇಶವೇ? ಸಂಪೂರ್ಣ ವರದಿ ಇಲ್ಲಿದೆ.