ಬಿಡದಿ ಟೌನ್‌ಶಿಪ್ ನೆಪವೋ? ಡಿಕೆಶಿ-ಎಚ್‌ಡಿಕೆ 20 ವರ್ಷದ ರಾಜಕೀಯ ಪೈಪೋಟಿಯ ಹೊಸ ಅಧ್ಯಾಯವೋ?
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ಹೊಸ ರಾಜಕೀಯ ಸಮರ ಆರಂಭವಾಗಿದೆ. ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನ ನೀಡಿದ ಡಿಕೆಶಿಗೆ, ಭೈರಮಂಗಲದಲ್ಲೇ ರೈತರ ಎದುರು ಚರ್ಚೆ ನಡೆಸೋಣ ಎಂದು ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದ್ದಾರೆ. ಆದರೆ ಇದು ಕೇವಲ ಟೌನ್‌ಶಿಪ್ ಯೋಜನೆಯ ವಿವಾದವೇ? ಅಥವಾ ಎರಡು ದಶಕಗಳಿಂದ ಸಾಗುತ್ತಿರುವ ಡಿಕೆ-ಎಚ್‌ಡಿಕೆ ರಾಜಕೀಯ ಪೈಪೋಟಿಯ ಮತ್ತೊಂದು ಅಧ್ಯಾಯವೇ? 2004ರಲ್ಲಿ ದೇವೇಗೌಡರ ಸೋಲು, 2006ರ ಕನಕಪುರದ ಐತಿಹಾಸಿಕ ವಾಕ್ಸಮರ, ತಾಯಿ ವಿಚಾರದ ವಿವಾದ, 2019ರ ಭಾವನಾತ್ಮಕ ಪ್ರಸಂಗ, 2024ರ ಆಸ್ತಿ ಸಮರ ಹಾಗೂ ಈಗಿನ ಬಿಡದಿ ಟೌನ್‌ಶಿಪ್ ಸಂಘರ್ಷದ ಸಂಪೂರ್ಣ ರಾಜಕೀಯ ಕಥೆಯನ್ನು ಈ ವಿಡಿಯೊದಲ್ಲಿ ವಿಶ್ಲೇಷಿಸಲಾಗಿದೆ.