ಕಂಠೀರವ ಕ್ರೀಡಾಂಗಣದ ಬಳಿ ಮ್ಯಾನ್‌ಹೋಲ್‌ ಮುಚ್ಚಿದ ಅಧಿಕಾರಿಗಳು

2 March 2026 8:17 PM IST

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಯಿಂದ ಕೂಗಳತೆ ದೂರದಲ್ಲಿರುವ ವಿಠ್ಠಲ್‌ ಮಲ್ಯ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಯ್ತೆರೆದು ನಿಂತಿದ್ದ ಮ್ಯಾನ್‌ಹೋಲ್‌ ಅನ್ನು ಕೊನೆಗೂ ಮುಚ್ಚಲಾಗಿದೆ. ಈ ಕುರಿತು 'ದ ಫೆಡರಲ್‌ ಕರ್ನಾಟಕ' ಪ್ರಕಟಿಸಿದ್ದ ವಿಡಿಯೊ ವರದಿಗೆ ತ್ವರಿತವಾಗಿ ಸ್ಪಂದಿಸಿರುವ ಜಿಬಿಎ ಅಧಿಕಾರಿಗಳು, ವಾಹನ ಸವಾರರ ಆತಂಕವನ್ನು ದೂರ ಮಾಡಿದ್ದಾರೆ. ಅತ್ಯಂತ ಹೆಚ್ಚು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿನ ಗಂಭೀರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲಾಗಿದೆ.