ಬೆಂಗಳೂರಿನ ಐಟಿ ಉದ್ಯೋಗಿಗಳ ವಿಭಿನ್ನ ಸಾಹಸ: ಯಂತ್ರಗಳಿಲ್ಲದೆ ತಯಾರಾಗುತ್ತಿದೆ ಅಪ್ಪಟ ಹೋಮ್‌ಮೇಡ್ ಮಸಾಲಾ!
ಬೆಂಗಳೂರಿನಂತಹ ವೇಗದ ನಗರದಲ್ಲಿ, ಸಮಯದ ಅಭಾವದಿಂದಾಗಿ ಬಹುತೇಕರು ರೆಡಿಮೇಡ್ ಮಸಾಲಾಗಳ ಮೊರೆ ಹೋಗುತ್ತಾರೆ. ಆದರೆ, ಸಿಲಿಕಾನ್ ಸಿಟಿಯ ಐಟಿ ಉದ್ಯೋಗಿಗಳ ತಂಡವೊಂದು ಈ ಧಾವಂತದ ನಡುವೆಯೂ ಗ್ರಾಹಕರಿಗೆ ಅಪ್ಪಟ ಮನೆಮಂದಿಯ ಕೈರುಚಿ ನೀಡಲು ಮುಂದಾಗಿದೆ. ಐಟಿ ಉದ್ಯೋಗಿ ಭರತ್ ಆರ್. ಮತ್ತು ಅವರ ಸ್ನೇಹಿತರ ತಂಡ ಸೇರಿ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇವರು ಕೆಲಸದ ಬಿಡುವಿನ ವೇಳೆಯಲ್ಲಿ ಯಾವುದೇ ಆಧುನಿಕ ಯಂತ್ರಗಳನ್ನು ಬಳಸದೆ, ಸಾಂಪ್ರದಾಯಿಕ ಪದ್ಧತಿಯಲ್ಲಿ ಪುಳಿಯೋಗರೆ ಪುಡಿ, ಗರಂ ಮಸಾಲಾ, ರಸಂ ಪೌಡರ್, ಬಿಸಿಬೇಳೆ ಬಾತ್ ಪೌಡರ್ ಮತ್ತು ಬಿರಿಯಾನಿ ಮಸಾಲಾಗಳನ್ನು ತಯಾರಿಸುತ್ತಿದ್ದಾರೆ. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.