x

ಬೆಂಗಳೂರಿನ ಕಾನ್ವೆಂಟ್ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರು; ಇಲ್ಲಿ ಓಡಾಡಿದ್ರೆ ಆಸ್ಪತ್ರೆ ಸೇರುವುದು 'ಗ್ಯಾರಂಟಿ'

27 Oct 2025 9:47 AM IST

ಬೆಂಗಳೂರಿನ ಹೃದಯ ಭಾಗದಲ್ಲಿರುವ, ರಿಚ್ಮಂಡ್ ವೃತ್ತವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕಾನ್ವೆಂಟ್ ರಸ್ತೆ. ಆದರೆ ಸದ್ಯ ಈ ರಸ್ತೆ ವಾಹನ ಸವಾರರಿಗೆ 'ಡೇಂಜರ್ ಝೋನ್' ಆಗಿದೆ. ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಾಯ್ತೆರೆದಿದ್ದು, ಕಿತ್ತು ಹೋದ ಡಾಂಬರು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದು ಸಾಗಿದಂತೆ. ಇಲ್ಲಿ ವಾಹನಗಳು ಆಮೆ ವೇಗದಲ್ಲಿ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸವಾರರು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. 'ಬ್ರ್ಯಾಂಡ್ ಬೆಂಗಳೂರು' ನಿರ್ಮಾಣದ ಮಾತುಗಳ ನಡುವೆ, ರಾಜಧಾನಿಯ ಪ್ರಮುಖ ರಸ್ತೆಯ ಈ ದಯನೀಯ ಸ್ಥಿತಿಗೆ ಯಾರು ಹೊಣೆ? ದ ಫೆಡಲ್​ ಕರ್ನಾಟಕದ ರಿಯಾಲಿಟಿ ಚೆಕ್'ನಲ್ಲಿ ಕಾನ್ವೆಂಟ್ ರಸ್ತೆಯ ನೈಜ ಚಿತ್ರಣವನ್ನು ವೀಕ್ಷಿಸಿ...