Bangalore Water Contamination: ನೀರಿನ ಸುರಕ್ಷತೆಗೆ BWSSB ಮಾಸ್ಟರ್ ಪ್ಲಾನ್
ಬೆಂಗಳೂರಿನ ಲಿಂಗರಾಜಪುರಂನ KSFC ಲೇಔಟ್ ನಲ್ಲಿ ಕಲುಷಿತ ನೀರು ಪೂರೈಕೆಯಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಯಾವುದೇ ಸಮಸ್ಯೆ ಆಗದಂತೆ BWSSB ತ್ವರಿತವಾಗಿ ಕ್ರಮ ಕೈಗೊಂಡು ಸರಿಪಡಿಸಿತು. ಇದರ ಬೆನ್ನಲ್ಲೇ ಬೆಂಗಳೂರಿನ ಬೇರೆ ಕಡೆ ಕಲುಷಿತ ನೀರು ಉಂಟಾದರೆ ಏನು ಎಂಬ ಆತಂಕ ಕೆಲವರಲ್ಲಿದೆ. ಈ ಎಲ್ಲಾ ಹಿನ್ನಲೆಯಲ್ಲಿ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ವಿ. ಅವರೊಂದಿಗೆ ʼದ ಫೆಡರಲ್ ಕರ್ನಾಟಕʼ ವಿಶೇಷ ಸಂದರ್ಶನ ನಡೆಸಿದೆ. ಕಲುಷಿತ ನೀರಿನ ಆತಂಕ, ಶುದ್ದಕುಡಿಯುವ ನೀರಿನ ಪೂರೈಕೆ ಬೆಂಗಳೂರಿನಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗದ ಹಾಗೆ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.


