ಬೆಂಗಳೂರು ಟ್ರಾಫಿಕ್, ಎಲ್ಲಿಯ ಬೆಂಗಳೂರು? ಎಲ್ಲಿಯ ಲಂಡನ್? ಡಿಸಿಎಂ ಹೇಳಿಕೆ ಬಗ್ಗೆ ಜನ ಏನಂತಾರೆ?
"ನಮ್ಮ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಸವಾಲು," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ಇದೀಗ ರಾಜಧಾನಿಯಾದ್ಯಂತ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಲಂಡನ್ ಮತ್ತು ದೆಹಲಿಯಂತಹ ಮಹಾನಗರಗಳ ಉದಾಹರಣೆ ನೀಡಿ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಜಾಗತಿಕ ವಿದ್ಯಮಾನ ಎಂದು ಸಮರ್ಥಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
